ಈ ಸಮಸ್ಯೆಗಳಿದ್ದರೆ ಪರಿಹಾರಕ್ಕಾಗಿ ಸೋಮವಾರದಂದು ತಪ್ಪದೇ ಶಿವನ ಆರಾಧನೆ ಮಾಡಿ

Written by Soma Shekar

Published on:

---Join Our Channel---

ಸೋಮವಾರ ಶಿವನಿಗೆ ಅತ್ಯಂತ ಪ್ರಿಯವಾದ ದಿನ.. ಈ ದಿನ ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸುವುದು ತುಂಬಾ ಒಳ್ಳೆಯದು ಎನ್ನುತ್ತಾರೆ ಪಂಡಿತರು.. ಈ ದಿನ ಶಿವನನ್ನು ಪೂಜಿಸುವ ಭಕ್ತರಿಗೆ ಮಹಾದೇವನ ವಿಶೇಷ ಕೃಪೆ ಲಭಿಸುತ್ತದೆ ಎಂಬ ನಂಬಿಕೆ ಇದೆ. ಶಿವನ ಆರಾಧನೆಯಿಂದ ಬಯಸಿದ ಇಷ್ಟಾರ್ಥಗಳು ಶೀಘ್ರವಾಗಿ ಈಡೇರುತ್ತವೆ. ಆದರೆ ಶಿವನ ಆರಾಧನೆಯನ್ನು ಸರಿಯಾದ ಕ್ರಮದಲ್ಲಿ ಮಾಡಿದರೆ ಅದರಿಂದ ಪುಣ್ಯ ಫಲಗಳು ದಕ್ಕುತ್ತವೆ ಎನ್ನುವುದು ಸತ್ಯ. ಹಾಗಾದರೆ ನಾವು ಈ ದಿನ ಆ ಮಹಾ ಶಿವನನ್ನು ಆರಾಧನೆ ಮಾಡುವಂತಹ ಸರಿಯಾದ ವಿಧಿ ವಿಧಾನಗಳ ಬಗ್ಗೆ ವಿವರವಾಗಿ ತಿಳಿಯೋಣ..

ಬಯಸಿದ ಸಂಗಾತಿಯನ್ನು ಪಡೆಯಲು, ಶಿವನ ಆರಾಧನೆಯು ಅತ್ಯಂತ ಮಂಗಳಕರವೆಂದು, ಫಲಪ್ರದವೆಂದು ಪರಿಗಣಿಸಲಾಗಿದೆ. ಮೇಲಾಗಿ ವೈವಾಹಿಕ ಜೀವನದಲ್ಲಿ ಯಾವುದೇ ಸಮಸ್ಯೆಗಳಿದ್ದರೂ ಕೂಡಾ ಸೋಮವಾರದಂದು ಶಿವನ ದೇವಸ್ಥಾನಕ್ಕೆ ಹೋಗಿ ಶಿವನ ದರ್ಶನ ಮಾಡವುದು ಒಳ್ಳೆಯದು ಎನ್ನಲಾಗಿದೆ. ಶಿವನ ಆರಾಧನೆಯು ದೋಷಗಳನ್ನು ಅಥವಾ ದುಃಖಗಳನ್ನು ತೊಡೆದು ಹಾಕಲು ಅತ್ಯಂತ ಪರಿಣಾಮಕಾರಿ ಮಾರ್ಗವೆಂದು ಪರಿಗಣಿಸಲಾಗಿದೆ. ಆದ್ದರಿಂದಲೇ ಸೋಮವಾರದಂದು ಭಕ್ತಿಯಿಂದ ಪೂಜಿಸಬೇಕು.
ಸೋಮವಾರ ಶಿವನ ಆರಾಧನೆಯನ್ನು ಮಾಡುವ ಭಕ್ತನ ದುಃಖ ಮತ್ತು ನೋವುಗಳನ್ನು ಶಿವನು ದೂರ ಮಾಡುತ್ತಾನೆ ಎಂದು ನಂಬಲಾಗಿದೆ.

ಶಿವನನ್ನು ಪೂಜಿಸುವ ಭಕ್ತನಿಗೆ ಶನೀಶ್ವರನು ಎಂದಿಗೂ ಕಿರುಕುಳ ನೀಡುವುದಿಲ್ಲ. ಅವನು ಸುಖವಾಗಿ ಬಾಳುತ್ತಾನೆ ಎಂಬ ನಂಬಿಕೆಯಿದೆ. ರೋಗದಿಂದ ಮುಕ್ತಿ ಹೊಂದಲು ಶಿವನ ಮಹಾಮೃತ್ಯುಂಜಯ ಮಂತ್ರವನ್ನು ರುದ್ರಾಕ್ಷ ಜಪದೊಂದಿಗೆ ಜಪಿಸಿ. ಕೊರಳಲ್ಲಿ ಧರಿಸಿರುವ ರುದ್ರಾಕ್ಷ ಮಾಲೆಯೊಂದಿಗೆ ಶಿವ ಮಂತ್ರವನ್ನು ಜಪಿಸಬೇಡಿ ಎಂದು ನೆನಪಿಡಿ.. ಇದಕ್ಕಾಗಿ ಬೇರೆ ಮಾಲೆಗಳನ್ನು ಧರಿಸುವುದು ಉತ್ತಮ. ಮನಸ್ಸಿನಲ್ಲಿ ಶಿವನ ನಾಮಸ್ಮರಣೆ ಮಾಡುತ್ತಾ ಬಂದರೆ ಒಳ್ಳೆಯ ಫಲ ಸಿಗುತ್ತದೆ..ಯಾವಾಗಲೂ ಸಂತೋಷ ಮತ್ತು ಸಂತೋಷದಿಂದ ಇರುತ್ತೀರಿ..

Leave a Comment