‘ಅಪ್ಪು ಅಮರ’ ಪುನೀತ್ ಅವರ ಸ್ಮರಣೆಯಲ್ಲಿ ಮತ್ತೊಂದು ಭವ್ಯ ಕಾರ್ಯಕ್ರಮಕ್ಕೆ ನಡೆದಿದೆ ಸಿದ್ಧತೆ

Written by Soma Shekar

Published on:

---Join Our Channel---

ಪವರ್ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರನ್ನು ಇಡೀ ದಕ್ಷಿಣ ಸಿನಿಮಾ ರಂಗವು ಮಿಸ್ ಮಾಡಿಕೊಳ್ಳುತ್ತಿದೆ. ಪುನೀತ್ ಅವರ ಅಕಾಲಿಕ ನಿಧನ ಒಂದು ದೊಡ್ಡ ಆ ಘಾ ತವನ್ನೇ ನೀಡಿದೆ. ಇಂತಹ ಮೇರು ನಟನ ಸ್ಮರಣಾರ್ಥವಾಗಿ ಇತ್ತೀಚಿಗಷ್ಟೇ ಕನ್ನಡ ಸಿನಿರಂಗದ ಎಲ್ಲಾ ಕಲಾವಿದರು ಸೇರಿ ಪುನೀತ್ ನಮನ ಎನ್ನುವ ಒಂದು ಕಾರ್ಯಕ್ರಮವನ್ನು ನಡೆಸಿದ್ದರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜನೆ ಮಾಡಿದ್ದ ಈ ಕಾರ್ಯಕ್ರಮದಲ್ಲಿ ಹಲವು ನಟ ನಟಿಯರು ಭಾಗವಹಿಸಿ ಪುನೀತ್ ಅವರನ್ನು ಸ್ಮರಿಸಿದ್ದರು.

ಈಗ ಇದರ ಬೆನ್ನಲ್ಲೇ ಕರ್ನಾಟಕದ ಕಿರುತೆರೆಯ ಕಲಾವಿದರು ಹಾಗೂ ತಂತ್ರಜ್ಞರೆಲ್ಲರೂ ಸೇರಿ ಮತ್ತೊಂದು ಕಾರ್ಯಕ್ರಮವನ್ನು ಆಯೋಜನೆ ಮಾಡಲು ಸಜ್ಜಾಗುತ್ತಿದ್ದಾರೆ. ಪುನೀತ್ ರಾಜ್‍ಕುಮಾರ್ ಅವರು ಕೇವಲ ಸಿನಿಮಾಗಳಿಗೆ ಮಾತ್ರವೇ ಸೀಮಿತವಾಗಿರಲಿಲ್ಲ. ಅವರು ಕಿರುತೆರೆಯಲ್ಲಿ ಕೂಡಾ ತಮ್ಮ ಛಾಪನ್ನು ಮೂಡಿಸಿದ್ದರು. ಕನ್ನಡದ ಕೋಟ್ಯಾಧಿಪತಿ, ಫ್ಯಾಮಿಲಿ ಪವರ್ ಶೋ ಗಳ ನಿರೂಪಣೆ ಮಾಡಿ ಜನರ ಮನಸ್ಸನ್ನು ಗೆದ್ದಿದ್ದರು. ಕಿರುತೆರೆಯಲ್ಲಿ ಧಾರಾವಾಹಿ ನಿರ್ಮಾಣಕ್ಕೆ ಕೈ ಹಾಕಿದ್ದರು.

ಈ ಎಲ್ಲಾ ಹಿನ್ನೆಲೆಯಲ್ಲಿ ನವೆಂಬರ್ 28 ರ ಭಾನುವಾರ ಸಂಜೆ 4 ಗಂಟೆಗೆ ಅಪ್ಪು ಅಮರ ಕಾರ್ಯಕ್ರಮವನ್ನು, ಬೆಂಗಳೂರಿನ‌ ಜಯನಗರ ನ್ಯಾಷನಲ್ ಕಾಲೇಜಿನ ಹೆಚ್.ಎನ್. ಕಲಾಕ್ಷೇತ್ರದ ಸಭಾಂಗಣದಲ್ಲಿ ಕಾರ್ಯಕ್ರಮವನ್ನು ಆಯೋಜನೆ ಮಾಡಲು ತೀರ್ಮಾನವನ್ನು ಮಾಡಲಾಗಿದೆ. ಬಹುತೇಕ ಎಲ್ಲಾ ಕಿರುತೆರೆಯ ಕಲಾವಿದರು ಮತ್ತು ತಂತ್ರಜ್ಞರು ಈ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಲಾಗಿದೆ. ಇದೊಂದು ವಿಶೇಷ ಕಾರ್ಯಕ್ರಮವಾಗಲಿದೆ ಎನ್ನಲಾಗಿದೆ.

ಅಪ್ಪು ಅವರನ್ನು ಸ್ಮರಿಸಿ, ನಮಿಸುವ ಜೊತೆಗೆ ಅವರ ಆದರ್ಶಗಳನ್ನು ಅಳವಡಿಸಿಕೊಳ್ಳುವ ವಿಶೇಷ ಕಾರ್ಯಕ್ರಮವನ್ನು ಇದಾಗಿಲಿದೆಯೆಂದು ಕರ್ನಾಟಕ ಟೆಲಿವಿಷನ್ ಅಸೋಸಿಯೇಷನ್ ತಿಳಿಸಿದೆ. ಎಲ್ಲಾ ಧಾರಾವಾಹಿ ನಿರ್ಮಾಣ ಸಂಸ್ಥೆಗಳ ಮುಖ್ಯಸ್ಥರ ಜೊತೆಗೆ ಮಾತುಕತೆಯನ್ನು ನಡೆಸಲಾಗಿದ್ದು, ನವೆಂಬರ್ 28 ರಂದು ಎಲ್ಲಾ ಸೀರಿಯಲ್ ಗಳ ಚಿತ್ರೀಕರಣಕ್ಕೆ ಬ್ರೇಕ್ ಹಾಕಿ, ಎಲ್ಲರೂ ಅಪ್ಪು ಅಮರ ಕಾರ್ಯಕ್ರಮದಲ್ಲಿ ಭಾಗವಹಿಸಲು ಅನುವು ಮಾಡಿಕೊಡಲಾಗುವುದು ಎನ್ನಲಾಗಿದೆ.

Leave a Comment