ಅದೃಷ್ಟ ಅಂದ್ರೆ ಹೀಗಿರಬೇಕು:157 ಮೀನು ಮಾರಿ ಕೋಟ್ಯಾಧಿಪತಿ ಆದ ಮೀನಗಾರ!!!

Written by Soma Shekar

Published on:

---Join Our Channel---

ಅದೃಷ್ಟ ಎಂದರೆ ಅದು ಮುಂಬೈನ ಈ ಮೀನುಗಾರನಿಗೆ ಒಲಿದ ಹಾಗೆ ಒಲಿದು ಬರಬೇಕು. ಭಾರತದಲ್ಲಿ ಮಾನ್ಸೂನ್ ಪ್ರಾರಂಭವಾದ ಹಿನ್ನೆಲೆಯಲ್ಲಿ, ಜೋರು ಮಳೆಯಿಂದ ಅಪಾಯಗಳು ಎದುರಾಗಬಹುದು ಎನ್ನುವ ಕಾರಣದಿಂದ ಚಂದ್ರಕಾಂತ್ ತರೆ ಎನ್ನುವ ಮೀನುಗಾರರೊಬ್ಬರು ಬಹಳಷ್ಟು ದಿನಗಳಿಂದ ಮೀನು ಹಿಡಿಯಲು ಸಾಧ್ಯವಾಗದೆ ಮನೆಯಲ್ಲೇ ಕೈಕಟ್ಟಿ ಕೂರಬೇಕಾಯಿತು. ಮೀನು ಹಿಡಿಯುವುದು ಉದ್ಯೋಗವಾಗಿದ್ದು, ಅದರಿಂದಲೇ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಅವರಿಗೆ ಮೀನು ಹಿಡಿಯಲಾದ ಆ ಪರಿಸ್ಥಿತಿಯಿಂದಾಗಿ ಮನೆಯಲ್ಲಿ ಆರ್ಥಿಕ ಸಂಕಷ್ಟಗಳು ಎದುರಾದವು. ಆದರೆ ಪರಿಸ್ಥಿತಿಗಳು ಸ್ವಲ್ಪ ಸುಧಾರಿಸಿದ ನಂತರ ಮತ್ತೆ ಮೀನು ಹಿಡಿಯಲು ಸಮುದ್ರಕ್ಕೆ ಇಳಿದ ಅವರು ಎಸೆದ ಬಲೆಯು ಅವರ ಅದೃಷ್ಟದ ಬಾಗಿಲನ್ನು ತೆರೆದಿತ್ತು. ಏಕೆಂದರೆ ಅವರು ಹಾಕಿದ ಬಲೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ 157 ಗೌಲ್ ಮೀನುಗಳು ಸಿಕ್ಕಿಹಾಕಿಕೊಂಡಿದ್ದವು.

ಗೌಲ್ (ಘೋಲ್) ಮೀನುಗಳು ವಿಶೇಷ ಜಾತಿಯ ಹಾಗೂ ದುಬಾರಿ ಬೆಲೆಯ ಮೀನುಗಳಾಗಿದ್ದು, ಇವನ್ನು ಮಾರುವ ಮೂಲಕ ಚಂದ್ರಕಾಂತ ತರೆ ಅವರು ಕೋಟ್ಯಾಧಿಪತಿ ಯಾಗಿದ್ದಾರೆ. ಹೌದು, ಈ ವಿಶೇಷ ಜಾತಿಯ ಮೀನುಗಳನ್ನು ಚಂದ್ರಕಾಂತ್ ಅವರು ಒಂದು ಕೋಟಿ 33 ಲಕ್ಷ ರೂಪಾಯಿಗಳಿಗೆ ಮಾರಾಟ ಮಾಡಿದ್ದಾರೆ. ಅವರು ಒಂದು ಮೀನಿಗೆ 85 ಸಾವಿರ ರೂಪಾಯಿಗಳನ್ನು ನಿಗಧಿ ಮಾಡಿದ್ದರು ಎನ್ನಲಾಗಿದ್ದು, ಯುಪಿ-ಬಿಹಾರ ಮೂಲದ ವ್ಯಾಪಾರಿಯೊಬ್ಬರು ಅಷ್ಟು ಮೀನುಗಳನ್ನು ಚಂದ್ರಕಾಂತ ಅವರಿಂದ ಖರೀದಿ ಮಾಡಿದ್ದಾರೆ. ಚಂದ್ರಕಾಂತ್ ಅವರು ಪಾಘ್ಲರ್ ನಲ್ಲಿ ತಮ್ಮ ಮೀನುಗಳ ಹರಾಜು ಮಾಡಿದ್ದರು, ಈ ಹರಾಜಿನಲ್ಲಿ ಎಲ್ಲಾ ಮೀನುಗಳು ಒಂದು ಕೋಟಿ 33 ರೂಪಾಯಿಗಳಿಗೆ ಮಾರಾಟವಾಗಿದೆ.

ಗೌಲ್ ಮೀನುಗಳನ್ನು ಬಂಗಾರದ ಮೀನುಗಳು ಎಂದು ಕೂಡಾ ಕರೆಯಲಾಗುತ್ತದೆ. ಈ ಮೀನುಗಳನ್ನು ಅನೇಕ ರೀತಿಯ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುವ ಕಾರಣದಿಂದಲೇ ಅವುಗಳ ಬೇಡಿಕೆ ಹೆಚ್ಚದ್ದು, ಬೆಲೆ ಕೂಡ ದುಬಾರಿಯಾಗಿದೆ. ಈ ಮೀನುಗಳನ್ನು ಸೌಂದರ್ಯವರ್ಧಕ ಉತ್ಪನ್ನಗಳ ತಯಾರಿಕೆಯಲ್ಲಿಯೂ ಬಳಸಿಕೊಳ್ಳಲಾಗುತ್ತದೆ. ಹಾಂಕಾಂಗ್, ಮಲೇಶಿಯಾ, ಥೈಲ್ಯಾಂಡ್ ಮತ್ತು ಜಪಾನ್ ನಂತಹ ದೇಶಗಳಲ್ಲಿ ಈ ಮೀನುಗಳಿಗೆ ಬೇಡಿಕೆ ಹೆಚ್ಚಾಗಿದೆ. ಸಮುದ್ರದಲ್ಲಿ ಮಾನ್ಸೂನ್ ಕಾರಣದಿಂದ ಸರ್ಕಾರ ಮೀನುಗಾರಿಕೆಗೆ ಹೇರಿದ್ದ ನಿಷೇಧವನ್ನು ಸಡಿಲಿಸಿದ ನಂತರ, ಆಗಸ್ಟ್ 28 ರಂದು ಚಂದ್ರಕಾಂತ್ ಎಂಟು ಜನ ಸಹಚರರೊಂದಿಗೆ ಮೀನು ಹಿಡಿಯಲು ಸಮುದ್ರಕ್ಕೆ ಇಳಿದಿದ್ದರು ಅಲ್ಲಿ ಅದೃಷ್ಟ ಎಂಬಂತೆ ಅವರ ಬಲೆಗೆ 157 ವಿಶೇಷ ಮೀನುಗಳು ಸಿಕ್ಕಿವೆ.

Leave a Comment